ಕಾರ್ಷಾಪಣ

ಪ್ರಾಚೀನ ಭಾರತದಲ್ಲಿ ಚಲಾವಣೆಯಲ್ಲಿದ್ದ ನಾಣ್ಯ. ಕರ್ಷ ಎಂಬ ಪದದಿಂದ ಬಂದದ್ದು. 80 ರತಿಯ ಅಥವಾ 1.83 ಗ್ರೇನ್‍ಗಳ ತೂಕ ಒಂದು ಕರ್ಷ. ಅದನ್ನು ಅನಂತರಕಾಲದಲ್ಲಿ ಪುರಾಣವೆಂದೂ ಕರೆಯುತ್ತಿದ್ದುದುಂಟು. ಕಾರ್ಷಾಪಣಗಳ ಮೇಲೆ ಮುದ್ರಿತವಾದ ಹಲವಾರು ಗುರುತುಗಳು ಸಿಕ್ಕುವುದರಿಂದ ಇವನ್ನು ಮುದ್ರಾಂಕಿತ ನಾಣ್ಯಗಳು (ಪಂಚ್‍ಮಾರ್ಕ್ಡ್ ಕಾಯಿನ್ಸ್) ಎಂದು ಕರೆಯಲಾಗಿದೆ. ಇವನ್ನು ಚಿನ್ನ, ಬೆಳ್ಳಿ ಅಥವಾ ತಾಮ್ರದಲ್ಲಿ ಮಾಡಲಾಗುತ್ತಿತ್ತು.   

  (ಪಿ.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ